ಈ ಟ್ರಿಕ್ ಬಳಸಿದರೆ ಮೊಬೈಲ್ ಇಂಟರ್ನೆಟ್ ಇಲ್ಲದಿದ್ದರೂ ಕಾರ್ಯನಿರ್ವಹಿಸುತ್ತೆ ವಾಟ್ಸಾಪ್!

WhatsApp Without Internet: ಪ್ರಸಿದ್ದ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಬಳಕೆಗೆ ಇಂಟರ್ನೆಟ್ ಬಹಳ ಮುಖ್ಯ. ಆದರೆ, ಕೆಲವು ಸುಲಭ ಟ್ರಿಕ್ ಅಳವಡಿಸಿಕೊಳ್ಳುವ ಮೂಲಕ ಅನಿವಾರ್ಯ ಸಂದರ್ಭಗಳಲ್ಲಿ ನೀವು ಇಂಟರ್ನೆಟ್ ಇಲ್ಲದೆಯೂ ವಾಟ್ಸಾಪ್ ಬಳಸಬಹುದು ಎಂದು ನಿಮಗೆ ತಿಳಿದಿದೆಯೇ? 

Written by - Yashaswini V | Last Updated : Jul 19, 2023, 11:35 AM IST
  • ಕೇವಲ ಕೆಲವೇ ಕೆಲವು ಹಂತಗಳನ್ನು ಅನುಸರಿಸುವ ಮೂಲಕ ನೀವು ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್ ಬಳಸಬಹುದು.
  • ಮತ್ತೊಂದು ಪ್ರಮುಖ ವಿಷಯವೆಂದರೆ ಇದಕ್ಕಾಗಿ ನಿಮಗೆ ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳ ಅಗತ್ಯವೂ ಇರುವುದಿಲ್ಲ.
  • ಜಸ್ಟ್ ವಾಟ್ಸಾಪ್ ವೆಬ್ ಆವೃತ್ತಿಯನ್ನು ಬಳಸುವ ಮೂಲಕ ನೀವು ನಿಮ್ಮ ಮೊಬೈಲ್ ನಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್ ಬಳಸಬಹುದು.
ಈ ಟ್ರಿಕ್ ಬಳಸಿದರೆ ಮೊಬೈಲ್ ಇಂಟರ್ನೆಟ್ ಇಲ್ಲದಿದ್ದರೂ ಕಾರ್ಯನಿರ್ವಹಿಸುತ್ತೆ ವಾಟ್ಸಾಪ್!  title=
WhatsApp Without Internet

WhatsApp Without Internet: ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯ ತ್ವರಿತ ಸಂದೇಶ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ವಾಟ್ಸಾಪ್ ಬಳಕೆದಾರರಿಗೆ ಹಲವು ವೈಶಿಷ್ಟಗಳನ್ನು ಒದಗಿಸುತ್ತದೆ. ವಾಟ್ಸಾಪ್ ಮೂಲಕ ಚಾಟಿಂಗ್, ಕರೆ, ವಿಡಿಯೋ ಕರೆಯಂತಹ ಹಲವು ಸೌಲಭ್ಯಗಳನ್ನು ಆನಂದಿಸಬಹುದು. ಆದರೆ, ವಾಟ್ಸಾಪ್ ಕಾರ್ಯನಿರ್ವಹಿಸಲು ಇಂಟರ್ನೆಟ್ ಬೇಕೇ ಬೇಕು. ಆದರೆ, ಕೆಲವು ಪ್ರದೇಶಗಳಲ್ಲಿ ನೆಟ್ವರ್ಕ್ ಸಮಸ್ಯೆಯಿಂದಾಗಿ ಇಂಟರ್ನೆಟ್ ಸೌಲಭ್ಯ ಲಭ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಒಂದೇ ಒಂದು ಸಣ್ಣ ಟ್ರಿಕ್ ಮೂಲಕ ನೀವು ಇಂಟರ್ನೆಟ್ ಇಲ್ಲದಿದ್ದರೂ ಸಹ ಸುಗಮವಾಗಿ ವಾಟ್ಸಾಪ್ ಚಾಟಿಂಗ್ ಅನ್ನು ಆನಂದಿಸಬಹುದು. ಹಾಗಿದ್ದರೆ, ಮೊಬೈಲ್ ಇಂಟರ್ನೆಟ್ ಇಲ್ಲದೆ ವಾಟ್ಸಾಪ್ ಬಳಸುವುದು ಹೇಗೆ ಎಂದು ತಿಳಿಯೋಣ... 

ಇಂಟರ್ನೆಟ್ ಇಲ್ಲದಿದ್ದಾಗ ವಾಟ್ಸಾಪ್ ಬಳಸಲು ಏನು ಮಾಡಬೇಕು? 
ಕೇವಲ ಕೆಲವೇ ಕೆಲವು ಹಂತಗಳನ್ನು ಅನುಸರಿಸುವ ಮೂಲಕ ನೀವು ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್ ಬಳಸಬಹುದು. ಮತ್ತೊಂದು ಪ್ರಮುಖ ವಿಷಯವೆಂದರೆ ಇದಕ್ಕಾಗಿ ನಿಮಗೆ ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳ ಅಗತ್ಯವೂ ಇರುವುದಿಲ್ಲ. ಜಸ್ಟ್ ವಾಟ್ಸಾಪ್ ವೆಬ್ ಆವೃತ್ತಿಯನ್ನು ಬಳಸುವ ಮೂಲಕ ನೀವು ನಿಮ್ಮ ಮೊಬೈಲ್ ನಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್ ಬಳಸಬಹುದು. 

ಇದನ್ನೂ ಓದಿ- ಖಾತೆಯಲ್ಲಿ 10 ಸಾವಿರ ರೂ.ಗಳೂ ಬ್ಯಾಲೆನ್ಸ್ ಹೊಂದಿರದ ವ್ಯಕ್ತಿಗೆ 9 ಕೋಟಿ ನೀಡಿದ ಏ‌ಟಿ‌ಎಮ್!

ಸ್ವತಃ ವಾಟ್ಸಾಪ್ ಬಳಕೆದಾರರಿಗೆ ಅನುಕೂಲವಾಗುವಂತೆ ಈ ಸೌಲಭ್ಯವನ್ನು ಒದಗಿಸಿದ್ದು  ಬಹು-ಸಾಧನ ಬೆಂಬಲದೊಂದಿಗೆ, ಒಮ್ಮೆ ಸಂಪರ್ಕಗೊಂಡರೆ, ನಿಮ್ಮ ಡೆಸ್ಕ್‌ಟಾಪ್, ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್‌ನಲ್ಲಿ ನೀವು ವಾಟ್ಸಾಪ್ ಅನ್ನು ಬಳಸಬಹುದಾಗಿದೆ. ಇದು ಫೋನ್‌ನಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್ ಅನ್ನು ಬಳಸಲು ತುಂಬಾ ಪ್ರಯೋಜನಕಾರಿ ಆಗಿದೆ. ಇದಲ್ಲದೆ, ಅಪ್ಲಿಕೇಶನ್‌ನಲ್ಲಿನ ಇತ್ತೀಚಿನ ವೈಶಿಷ್ಟ್ಯ ವಾಟ್ಸಾಪ್ ಪ್ರಾಕ್ಸಿ ಮೂಲಕ ನೀವು ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್ ಬಳಸಬಹುದು. 

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪ್ರಾಕ್ಸಿ ಮೂಲಕ ಇಂಟರ್ನೆಟ್ ಇಲ್ಲದೆ ವಾಟ್ಸಾಪ್ ಅನ್ನು ಆಫ್‌ಲೈನ್‌ನಲ್ಲಿ ಬಳಸುವುದು ಹೇಗೆ ಎಂಬುದು ಇಲ್ಲಿದೆ.
ಹೊಸ ಪ್ರಾಕ್ಸಿ ವೈಶಿಷ್ಟ್ಯವನ್ನು ಪರಿಚಯಿಸಿದೆ ಅದು ಇಂಟರ್ನೆಟ್ ಇಲ್ಲದೆ WhatsApp ಅನ್ನು ಬಳಸುವುದನ್ನು ಮುಂದುವರಿಸಲು ಪ್ರಾಕ್ಸಿ ಸರ್ವರ್‌ಗೆ ಸಂಪರ್ಕಿಸಲು ನಿಮಗೆ ಅನುಮತಿಸುತ್ತದೆ. ಸರಳ ಭಾಷೆಯಲ್ಲಿ ಹೇಳುವುದಾದರೆ ನೀವು ಇಂಟರ್ನೆಟ್ ಸ್ಥಗಿತದ ಸಂದರ್ಭದಲ್ಲಿ ವಾಟ್ಸಾಪ್ ಡೀಫಾಲ್ಟ್ ಆಗಿ ಕಾರ್ಯನಿರ್ವಹಿಸಲು ಅನುಮತಿಸುತ್ತದೆ. 

ಇದನ್ನೂ ಓದಿ- ಭಾರತದ ಯುಪಿಐ ಪೇಮೆಂಟ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ದೇಶಗಳಿವು

ನೀವು WhatsApp ಅನ್ನು ಆಫ್‌ಲೈನ್‌ನಲ್ಲಿ ಬಳಸಲು ಈ ಹ್ಯಾಕ್ ಅನ್ನು ಬಳಸಬಹುದು. ಇದಕ್ಕಾಗಿ ಪ್ರಾಕ್ಸಿ ನೆಟ್‌ವರ್ಕ್ ಅನ್ನು ಬಳಸಲು ಬಳಕೆದಾರರು ವಾಟ್ಸಾಪ್‌ನ ಇತ್ತೀಚಿನ ಅಥವಾ ನವೀಕರಿಸಿದ ಆವೃತ್ತಿಯನ್ನು ಹೊಂದಿರಬೇಕು. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ. 

ಹಂತ 1:  Play Store ಅಥವಾ App Store ಮೂಲಕ ನಿಮ್ಮ ಫೋನ್‌ನಲ್ಲಿ WhatsApp ಅನ್ನು ಇತ್ತೀಚಿನ ಆವೃತ್ತಿಗೆ ನವೀಕರಿಸಿ. ವೈಶಿಷ್ಟ್ಯವು Android ಮತ್ತು iOS ಎರಡರಲ್ಲೂ ಲಭ್ಯವಿದೆ.

ಹಂತ 2:  ನಿಮ್ಮ ಫೋನ್‌ನಲ್ಲಿ WhatsApp ತೆರೆಯಿರಿ. ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳ ವಿಭಾಗಕ್ಕೆ ಹೋಗಿ.

ಹಂತ 3:  ಸಂಗ್ರಹಣೆ ಮತ್ತು ಡೇಟಾ (Storage and Data) ವಿಭಾಗಕ್ಕೆ ಭೇಟಿ ನೀಡಿ.

ಹಂತ 4:  ನೆಟ್‌ವರ್ಕ್ ಟ್ಯಾಬ್‌ ಅಡಿಯಲ್ಲಿ, ಪ್ರಾಕ್ಸಿ (Proxy) ಆಯ್ಕೆಯನ್ನು ಆರಿಸಿ.

ಹಂತ 5:  ಪ್ರಾಕ್ಸಿ ಬಳಸಿ (Use Proxy) ಎಂಬ ಆಯ್ಕೆಯನ್ನು  ಸಕ್ರಿಯಗೊಳಿಸಿ. 

ಒಮ್ಮೆ ಪ್ರಾಕ್ಸಿ ಆಯ್ಕೆಯನ್ನು ಕ್ಲಿಕ್ ಮಾಡಿದ ಇದನ್ನು ಬಳಸಲು ಪ್ರಾಕ್ಸಿ ವಿಳಾಸವನ್ನು ನಮೂಡಿಸಬೇಕಾಗುತ್ತದೆ.  ಯಾವುದೇ ಪ್ರಾಕ್ಸಿ ವಿಳಾಸವನ್ನು ಹೊಂದಿಲ್ಲದಿದ್ದರೆ, ಅವರು ಒಂದನ್ನು ರಚಿಸಬೇಕು ಮತ್ತು ಅದನ್ನು ಡೀಫಾಲ್ಟ್ ಆಗಿ ಸೇವ್ ಮಾಡಬೇಕು. 

ಸೇವ್ ಬಳಿಕ ಹ್ಯಾಂಡ್‌ಸೆಟ್ ಸೈನ್ ಸಂಪರ್ಕವನ್ನು ಯಶಸ್ವಿಯಾಗಿ ತೋರಿಸಿದರೆ, ಬಳಕೆದಾರರು ನಂತರ ಚೆಕ್‌ಮಾರ್ಕ್ ಅನ್ನು ನೋಡುತ್ತಾರೆ. ಅದು ನೀವು ಯಾವುದೇ ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಅಪ್ಲಿಕೇಶನ್ ಅನ್ನು ಬಳಸಲು ಸಿದ್ಧ ಎಂದು ಸೂಚಿಸುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News