ಭಾರತದಲ್ಲಿ 76 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್ ಮಾಡಿದ ವಾಟ್ಸಾಪ್: ಕಾರಣ ಏನ್ ಗೊತ್ತಾ?

WhatsApp: ಜನವರಿ 1-31 ರ ನಡುವೆ ಮೆಟಾ ಮಾಲೀಕತ್ವದ ಕಂಪನಿ ವಾಟ್ಸಾಪ್ ಭಾರತದಲ್ಲಿ 6,728,000 ಖಾತೆಗಳನ್ನು ನಿಷೇಧಿಸಿತ್ತು. ಇದೀಗ ಫೆಬ್ರವರಿ ತಿಂಗಳಿನಲ್ಲಿ ಸುಮಾರು 76 ಲಕ್ಷಕ್ಕೂ ಹೆಚ್ಚಿನ ಖಾತೆಗಳನ್ನು ವಾಟ್ಸಾಪ್ ಬ್ಯಾನ್ ಮಾಡಿದೆ ಎಂದು ಹೇಳಲಾಗಿದೆ.   

Written by - Yashaswini V | Last Updated : Apr 2, 2024, 02:25 PM IST
  • ತ್ವರಿತ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ದೇಶದಲ್ಲಿ 500 ಮಿಲಿಯನ್ ಬಳಕೆದಾರರನ್ನು ಹೊಂದಿದೆ
  • ಫೆಬ್ರವರಿಯಲ್ಲಿ ದಾಖಲೆಯ 16,618 ದೂರು ವರದಿಗಳನ್ನು ಸ್ವೀಕರಿಸಿದೆ
  • "Accounts Actioned" ವರದಿಯ ಆಧಾರದ ಮೇಲೆ ಪರಿಹಾರ ಕ್ರಮಗಳನ್ನು ತೆಗೆದುಕೊಂಡಿರುವ ವರದಿಗಳನ್ನು ಉಲ್ಲೇಖಿಸುತ್ತದೆ.
ಭಾರತದಲ್ಲಿ 76 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್ ಮಾಡಿದ ವಾಟ್ಸಾಪ್: ಕಾರಣ ಏನ್ ಗೊತ್ತಾ?  title=

WhasApp Big Action: ಮೆಟಾ ಒಡೆತನದ ಇನ್‌ಸ್ಟೆಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಫೆಬ್ರವರಿ (2024) ರಲ್ಲಿ ಭಾರತದಲ್ಲಿಸುಮಾರು 76 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳನ್ನು ಬ್ಯಾನ್ ಮಾಡಿರುವುದಾಗಿ ಹೇಳಿದೆ. ಐಟಿ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು, 2021 ರ ಅನುಸಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಾಟ್ಸಾಪ್ ಸೋಮವಾರ (01 ಏಪ್ರಿಲ್) ಮಾಹಿತಿ ನೀಡಿದೆ. 

ಫೆಬ್ರವರಿಯಲ್ಲಿ ಭಾರತದಲ್ಲಿ 76 ಲಕ್ಷಕ್ಕೂ ಅಧಿಕ ವಾಟ್ಸಾಪ್ ಖಾತೆ ನಿಷೇಧ! 
ವಾಟ್ಸಾಪ್ ಖಾತೆಗಳನ್ನು ಬ್ಯಾನ್ (Whatsapp Account Ban) ಮಾಡಿರುವ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮೆಟಾ ಮಾಲೀಕತ್ವದ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್, ಫೆಬ್ರವರಿ 1-29 ರ ನಡುವೆ, ಸುಮಾರು 7,628,000 ಖಾತೆಗಳನ್ನು ನಿಷೇಧಿಸಲಾಗಿದೆ. ಬಳಕೆದಾರರಿಂದ ಯಾವುದೇ ವರದಿಗಳು ಬರುವ ಮೊದಲು,   1,424,000 ಖಾತೆಗಳನ್ನು ಪೂರ್ವಭಾವಿಯಾಗಿ ನಿಷೇಧಿಸಲಾಗಿತ್ತು ಎಂದು ತನ್ನ ಮಾಸಿಕ ಅನುಸರಣೆ ವರದಿಯಲ್ಲಿ ತಿಳಿಸಿದೆ. 

ಇದನ್ನೂ ಓದಿ- WhatsApp: ವಾಟ್ಸಾಪ್‌ನ ಚಾಟ್ ಪಟ್ಟಿಯಲ್ಲಿ ಶೀಘ್ರವೇ ಲಭ್ಯವಾಗಲಿದೆ ಈ ಸೌಲಭ್ಯ

ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ (WhatsApp) ದೇಶದಲ್ಲಿ 500 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿದ್ದು, ಫೆಬ್ರವರಿಯಲ್ಲಿ ದೇಶದಲ್ಲಿ ದಾಖಲೆಯ 16,618 ದೂರು ವರದಿಗಳನ್ನು ಸ್ವೀಕರಿಸಿದೆ. ಪ್ರತಿಕ್ರಿಯೆಯಾಗಿ 22 ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 

"Accounts Actioned" ವರದಿಯ ಆಧಾರದ ಮೇಲೆ ಪರಿಹಾರ ಕ್ರಮಗಳನ್ನು ತೆಗೆದುಕೊಂಡಿರುವ ವರದಿಗಳನ್ನು ಉಲ್ಲೇಖಿಸುತ್ತದೆ. ಇದು ಖಾತೆಯನ್ನು ಬ್ಯಾನ್ ಮಾಡಲು ಅಥವಾ ಹಿಂದೆ ನಿಷೇಧಿತ ಖಾತೆಯನ್ನು ಮರುಸ್ಥಾಪಿಸಲು ಕಾರಣವಾಗಬಹುದು.

ಸುರಕ್ಷತಾ ವೈಶಿಷ್ಟ್ಯಗಳು ಮತ್ತು ನಿಯಂತ್ರಣಗಳ ಜೊತೆಗೆ, ಈ ಪ್ರಯತ್ನಗಳನ್ನು ಮೇಲ್ವಿಚಾರಣೆ ಮಾಡಲು ಕಂಪನಿಯು ಎಂಜಿನಿಯರ್‌ಗಳು, ಡೇಟಾ ವಿಜ್ಞಾನಿಗಳು, ವಿಶ್ಲೇಷಕರು, ಸಂಶೋಧಕರು ಮತ್ತು ಕಾನೂನು ಜಾರಿ, ಆನ್‌ಲೈನ್ ಸುರಕ್ಷತೆ ಮತ್ತು ತಂತ್ರಜ್ಞಾನದ ತಜ್ಞರನ್ನು ಒಳಗೊಂಡ ತಂಡವನ್ನು ಹೊಂದಿರುವುದಾಗಿ ವಾಟ್ಸಾಪ್ ಹೈಲೈಟ್ ಮಾಡಿದೆ. 

ಇದನ್ನೂ ಓದಿ- WhatsApp New Feature: ಶೀಘ್ರದಲ್ಲೇ ಸ್ಟೇಟಸ್ ನಲ್ಲಿ ನೀವು ಈ ಕೆಲಸ ಮಾಡಬಹುದು! ಸಿಗಲಿದೆ ಜಬರ್ದಸ್ತ್ ವೈಶಿಷ್ಟ್ಯ!

ಗಮನಾರ್ಹವಾಗಿ, ಜನವರಿ 1-31 ರ ಅವಧಿಯಲ್ಲಿ, ಕಂಪನಿಯು "6,728,000 ಖಾತೆಗಳನ್ನು" ನಿಷೇಧಿಸಿತ್ತು, ಇವುಗಳಲ್ಲಿ ಸುಮಾರು 1,358,000 ಬಳಕೆದಾರರ ವರದಿಗಳ ಮೊದಲು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News